unfoldingWord 44 - ಪೇತ್ರ ಯೋಹಾನರು ಭಿಕ್ಷುಕನನ್ನು ವಾಸಿಮಾಡಿದ್ದು
Muhtasari: Acts 3-4:22
Nambari ya Hati: 1244
Lugha: Kannada
Hadhira: General
Kusudi: Evangelism; Teaching
Features: Bible Stories; Paraphrase Scripture
Hali: Approved
Hati ni miongozo ya kimsingi ya kutafsiri na kurekodi katika lugha zingine. Yanafaa kurekebishwa inavyohitajika ili kuzifanya zieleweke na kufaa kwa kila utamaduni na lugha tofauti. Baadhi ya maneno na dhana zinazotumiwa zinaweza kuhitaji maelezo zaidi au hata kubadilishwa au kuachwa kabisa.
Maandishi ya Hati
ಒಂದು ದಿನ, ಪೇತ್ರ ಮತ್ತು ಯೋಹಾನರು ದೇವಾಲಯಕ್ಕೆ ಹೋದರು. ಅದರ ದ್ವಾರದ ಬಳಿಯಲ್ಲಿ ಕುಂಟುನೊಬ್ಬನು ಕುಳಿತುಕೊಂಡು ಹಣಕ್ಕಾಗಿ ಭಿಕ್ಷೆಬೇಡುತ್ತಿದ್ದನು.
ಪೇತ್ರನು ಆ ಕುಂಟನನ್ನು ನೋಡಿ "ನಿನಗೆ ಕೊಡಲು ನನ್ನಲ್ಲಿ ಹಣವಿಲ್ಲ. ಆದರೆ ನಾನು ನನ್ನಲ್ಲಿರುವುದನ್ನು ನಿನಗೆ ಕೊಡುತ್ತೇನೆ. ಯೇಸುವಿನ ಹೆಸರಿನಲ್ಲಿ ಎದ್ದು ನಡೆದಾಡು" ಎಂದು ಹೇಳಿದನು.
ತಕ್ಷಣವೇ, ದೇವರು ಕುಂಟನನ್ನು ವಾಸಿಮಾಡಿದನು. ಅವನು ನಡೆಯಲು, ಕುಣಿಯಲು ಮತ್ತು ದೇವರನ್ನು ಕೊಂಡಾಡಲು ಪ್ರಾರಂಭಿಸಿದನು. ದೇವಾಲಯದ ಅಂಗಳದಲ್ಲಿದ್ದ ಜನರು ಬೆರಗಾದರು.
ವಾಸಿಯಾದ ಮನುಷ್ಯನನ್ನು ನೋಡಲು ಬೇಗನೇ ಜನಸಮೂಹವು ಬಂದಿತು. ಪೇತ್ರನು ಅವರಿಗೆ, “ಈ ಮನುಷ್ಯನು ವಾಸಿಯಾಗಿದ್ದಾನೆ, ಆದರೆ ಆಶ್ಚರ್ಯಪಡಬೇಡಿರಿ. ನಾವು ನಮ್ಮ ಸ್ವಂತ ಶಕ್ತಿಯಿಂದಾಗಲಿ ಅಥವಾ ನಾವು ದೇವರನ್ನು ಸನ್ಮಾನಿಸುವ ಕಾರಣದಿಂದಾಗಲಿ ಅವನನ್ನು ಗುಣಪಡಿಸಲಿಲ್ಲ. ಆದರೆ ನಾವು ಯೇಸುವನ್ನು ನಂಬುವುದ್ದರಿಂದ ಯೇಸು ಈ ಮನುಷ್ಯನನ್ನು ತನ್ನ ಶಕ್ತಿಯಿಂದ ಗುಣಪಡಿಸಿದನು."
"ಯೇಸುವನ್ನು ಕೊಲ್ಲಬೇಕೆಂದು ರೋಮನ್ ರಾಜ್ಯಪಾಲನಿಗೆ ಹೇಳಿದವರು ನೀವು. ನೀವು ಎಲ್ಲರಿಗೂ ಜೀವವನ್ನು ಕೊಡುವಾತನನ್ನು ಕೊಲ್ಲಿಸಿದ್ದೀರಿ. ಆದರೆ ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನು. ನೀವು ಆಗ ಏನು ಮಾಡಿದ್ದೀರಿ ಎಂಬುದರ ಅರಿವು ನಿಮಗಿರಲಿಲ್ಲ. ಆದರೆ ನೀವು ಆ ಕಾರ್ಯಗಳನ್ನು ಮಾಡಿದಾಗ, ಪ್ರವಾದಿಗಳು ಹೇಳಿರುವ ಮಾತು ನೆರವೇರಿತು. ಅವರು ಮೆಸ್ಸೀಯನು ಕಷ್ಟಗಳನ್ನನುಭವಿಸಿ ಸಾಯುತ್ತಾನೆ ಎಂದು ಹೇಳಿದ್ದರು. ದೇವರು ಅದನ್ನು ಈ ರೀತಿಯಾಗಿ ಮಾಡಿದನು. ಆದ್ದರಿಂದ ಈಗ ಪಶ್ಚಾತ್ತಾಪಪಡಿರಿ ಮತ್ತು ದೇವರ ಕಡೆಗೆ ತಿರುಗಿಕೊಳ್ಳಿರಿ, ಆತನು ನಿಮ್ಮ ಪಾಪಗಳನ್ನು ತೊಳೆದುಬಿಡುವನು” ಎಂದು ಹೇಳಿದನು.
ದೇವಾಲಯದ ಮುಖಂಡರು ಪೇತ್ರ ಮತ್ತು ಯೋಹಾನರು ಹೇಳುವುದನ್ನು ಕೇಳಿಸಿಕೊಂಡಾಗ ತುಂಬಾ ಬೇಸರಗೊಂಡರು. ಆದ್ದರಿಂದ ಅವರನ್ನು ಬಂಧಿಸಿ ಸೆರೆಮನೆಗೆ ಹಾಕಿದರು. ಆದರೆ ಪೇತ್ರನು ಹೇಳಿದ್ದನ್ನು ಅನೇಕರು ನಂಬಿದ್ದರು. ಯೇಸುವನ್ನು ನಂಬಿದ ಗಂಡಸರ ಸಂಖ್ಯೆಯು ಸುಮಾರು 5,000 ಕ್ಕೆ ಏರಿತು.
ಮರುದಿನ, ಯೆಹೂದ್ಯ ಮುಖಂಡರು ಪೇತ್ರ ಮತ್ತು ಯೋಹಾನರನ್ನು ಮಹಾಯಾಜಕನ ಹಾಗೂ ಇತರ ಧಾರ್ಮಿಕ ಮುಖಂಡರ ಬಳಿಗೆ ಕರೆತಂದರು. ಅವರು ಕುಂಟನಾಗಿದ್ದ ಮನುಷ್ಯನನ್ನು ಸಹ ಕರೆತಂದರು. ಅವರು ಪೇತ್ರ ಮತ್ತು ಯೋಹಾನರಿಗೆ, "ಈ ಕುಂಟನಾದ ಮನುಷ್ಯನನ್ನು ನೀವು ಯಾವ ಶಕ್ತಿಯನ್ನು ಗುಣಪಡಿಸಿದ್ದೀರಿ?" ಎಂದು ಕೇಳಿದರು.
ಪೇತ್ರನು ಅವರಿಗೆ, "ನಿಮ್ಮ ಮುಂದೆ ನಿಂತಿರುವ ಈ ಮನುಷ್ಯನು ಮೆಸ್ಸೀಯನಾದ ಯೇಸುವಿನ ಶಕ್ತಿಯಿಂದ ಗುಣವಾಗಿದ್ದಾನೆ. ನೀವು ಯೇಸುವನ್ನು ಶಿಲುಬೆಗೆ ಹಾಕಿಸಿದ್ದೀರಿ, ಆದರೆ ದೇವರು ಆತನನ್ನು ಜೀವಂತವಾಗಿ ಎಬ್ಬಿಸಿದನು! ನೀವು ಆತನನ್ನು ತಿರಸ್ಕರಿಸಿದ್ದೀರಿ, ಆದರೆ ರಕ್ಷಣೆಹೊಂದಲು ಯೇಸುವಿನ ಶಕ್ತಿಯನ್ನು ಹೊರತುಪಡಿಸಿ ಬೇರೆ ಯಾವ ಮಾರ್ಗವಿಲ್ಲ! ಎಂದು ಉತ್ತರಿಸಿದನು.
ಪೇತ್ರ ಯೋಹಾನರು ಬಹಳ ಧೈರ್ಯದಿಂದ ಮಾತನಾಡಿದ್ದರಿಂದ ಮುಖಂಡರು ಆಶ್ಚರ್ಯಪಟ್ಟರು . ಅವರು ಈ ಮನುಷ್ಯರು ಅವಿದ್ಯಾವಂತರಾದ ಸಾಮಾನ್ಯ ಮನುಷ್ಯರೆಂದು ತಿಳಿದಾಗ್ಯೂ ಆ ಮನುಷ್ಯರು ಯೇಸುವಿನೊಂದಿಗೆ ಇದ್ದವರು ಎಂದು ಅವರು ನೆನಪಿಸಿಕೊಂಡರು. ಆದ್ದರಿಂದ ಅ ಮುಖಂಡರು ಅವರಿಗೆ, "ಯೇಸು ಎಂಬ ಈ ಮನುಷ್ಯನ ಬಗ್ಗೆ ಜನರಿಗೆ ಬೋಧಿಸಿದರೆ ನಾವು ನಿಮ್ಮನ್ನು ಹೆಚ್ಚಾಗಿ ಶಿಕ್ಷಿಸುತ್ತೇವೆ" ಎಂದು ಹೇಳಿದರು. ಈ ರೀತಿಯ ಅನೇಕ ಸಂಗತಿಗಳನ್ನು ಹೇಳಿದ ನಂತರ ಅವರು ಪೇತ್ರ ಯೋಹಾನರನ್ನು ಕಳುಹಿಸಿಬಿಟ್ಟರು.